Posts

Showing posts from May, 2025

ನನ್ನವಳೇ - ಈ ಕವನ ನಿನಗಾಗಿ

ನನ್ನವಳೇ.... ನೀ ನನಗೆ ಚಂದ! ನಿನ್ನ ನಗು ಇನ್ನೂ ಚಂದ!! ನಿನ್ನ ನೋಟ ನನ್ನ ಮೇಲೆ ಬಿದ್ದ ಕ್ಷಣ ನನ್ನ ಬದುಕು ಇನ್ನೂ ಆಯ್ತು ಚಂದ ಚಂದ ಚಂದ!!! ನಿನ್ನ ನಗು ಇರುವುದು ನನ್ನ ಕಿವಿಯಲ್ಲಿ! ನಿನ್ನ ನೋಟ ನನ್ನ ಕಣ್ಣಲ್ಲಿ!! ನೀ ಇರುವೆ ಸದಾ ನನ್ನ ಉಸಿರಲ್ಲಿ!!! ನಿನ್ನ ಪುಟ್ಟ ಕೈ ಹೊಡೆಯುವುದು ನನ್ನ ಸ್ಪರ್ಶಕಾಗಿ! ನಿನ್ನ ನಿಲ್ಲದ ಮಾತುಗಳು ಇರಲಿ ನನ್ನ ಕಿವಿಯಲ್ಲಿ ಗುನುಗೋಕಾಗಿ!! ನಿನ್ನ ಎದೆಬಡಿತ ಹೇಳುವುದು ಎಂದು ನಾನು ನಿನ್ನವನಾಗಲ್ಲಿ!!! ಆ ದೇವರೇ ಸೇರಿಸಿದ ನಾವಿಬ್ಬರೂ ಸದಾ ಹೀಗೆ ಇರಲಿ ಎಂದು ಒಂದೇ ಮನದಲಿ!!!! ಎಷ್ಟು ಹೇಳಿದರೂ ಸಾಲುತ್ತಿಲ್ಲ ಪದಗಳು ನಿನ್ನ ನನ್ನ ಸಂಬಂಧ ವರ್ಣಿಸುವಲ್ಲಿ!!!!! ಸದಾ ಹೀಗೆ ಇರು ನನ್ನಲಿ ನನ್ನ ಮನದಲಿ ನನ್ನ ಮನದಲಿ!!!!!! ಇಂತಿ ನಿನ್ನ ಪ್ರೀತಿಯ....!!!!!